
11th September 2025
ಬೈಲಹೊಂಗಲ- ನಗರದ ಬೆಳಗಾವಿ ರಸ್ತೆಯಲ್ಲಿರುವ ಎಂಎಸ್ಐಎಲ್. ಮಳಿಗೆಯನ್ನು ತೆರೆವು ಗೊಳಿಸುವ ಆಗ್ರಹಿಸಿ ಕಿತ್ತೂರು ಕರ್ನಾಟಕ ಸೇನೆಯ ಪದಾಧಿಕಾರಿಗಳು
ಎಂಎಸ್ಐಎಲ್ ಮಳಿಗೆ ಮುಂದೆ ದರಣಿ ನಡೆಸಿದರು.
ಕರ್ನಾಟಕ ಸೇನೆಯ ಅಧ್ಯಕ್ಷರಾದ ಶಿವಾನಂದ ಕೋಲಕಾರ ಮಾತನಾಡಿ,
ಬೈಲಹೊಂಗಲ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ನವೋದಯ ವಸತಿ ಶಾಲೆಯಲ್ಲಿ ಅತಿ ಕಡು ಬಡತನದ ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೈಲಹೊಂಗಲ ಬೆಳಗಾವಿ ರಸ್ತೆ ಪಕ್ಕದಲ್ಲಿ ಎಂಎಸ್ಐಎಲ್ ಮಳಿಗೆಯಿಂದ ಪಾರ್ಸೆಲ್ ತೆಗೆದುಕೊಂಡು ಅಂಗಡಿಯ ಹಿಂದೆ ಕುಳಿತು ಕುಡಿದ ನಷೆಯಲ್ಲಿ ಶಾಲೆಗೆ ಬಂದು ಗೇಟ್ ಬಡಿಯುವುದು. ಒದೆಯುವದು ಮಾಡುತ್ತಿದ್ದಾರೆ.ರಾತ್ರಿ ವೇಳೆ ವಿದ್ಯಾರ್ಥಿನಿಯರು ರಾತ್ರಿ ಹೊರಗೆ ಬಾರದ ರೀತಿಯ ಪರಿಸ್ಥಿತಿ ಉಂಟಾಗಿದೆ ಹಾಗೂ ಶಾಲೆಗೆ ವಿದ್ಯಾರ್ಥಿಗಳು, ಶಿಕ್ಷಕರು ಪಾಲಕರು ಹೋಗುವ ದಾರಿಯಲ್ಲಿ ಕುಡಿದು ಕುಡಿದ ಬಾಟಲಿಗಳನ್ನು ರಸ್ತೆಯಲ್ಲಿ ಒಡೆದು ತುಂಬಾ ತೊಂದರೆ ಕೊಡುತ್ತಿದ್ದಾರೆ. ರೈತರ ಜಮೀನುಗಳಲ್ಲಿ ಕುಡಿದು ಬಾಟಲಿ, ಗ್ಲಾಸ್, ನೀರಿನ ಬಾಟಲ್, ಸಿಗರೇಟ್ ಪ್ಯಾಕ್, ಕುರುಕುರೆ ಪ್ಯಾಕೆಟ್ಗಳನ್ನು ಎಸೆಯುವುದರಿಂದ ರೈತರು ಹೊಲಗಳಲ್ಲಿ ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಹೊಲದಲ್ಲಿರುವ ಬಣವಿಗೆ ಸಿಗರೇಟ್ ಸೇದಿ ಬಣವಿಗೆ ಬೆಂಕಿ ಹಚ್ಚಿ ರೈತರಿಗೆ ತುಂಬಾ ತೊಂದರೆ ಕೊಟ್ಟಿರುತ್ತಾರೆ. ಕೆ ಆರ್ ಸಿ ಎಸ್ ಕಾಲೇಜಿನ ವಿದ್ಯಾರ್ಥಿನಿಯರು ಸಾಯಂಕಾಲ ಮನೆಗೆ ಬರುತ್ತಿರುವ ವೇಳೆಯಲ್ಲಿ ಕುಡುಕರು ಅವರಿಗೆ ತೊಂದರೆ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಹೆಣ್ಣು ಮಕ್ಕಳು ಬಸ್ ಸ್ಟಾಪ್ ಗೆ ಬರಲು ಹೆದರುತ್ತಿದ್ದಾರೆ. ಹೆಣ್ಣು ಮಕ್ಕಳ ವಸತಿ ಶಾಲೆ ಇರುವುದರಿಂದ ಕುಡಿದು ನಶೆಯಲ್ಲಿ ಏನಾದರೂ ಅನಾಹುತ ಆಗುವ ಸಂಭವ ಇರುತ್ತದೆ. ಆದಕಾರಣ ದಯಮಾಡಿ ತಾವುಗಳು ಹೆಣ್ಣು ಮಕ್ಕಳ ಹಿತ ದೃಷ್ಟಿಯಿಂದ ಎಂಎಸ್ ಐ ಎಲ್ ಮಳಿಗೆ ಮಧ್ಯ ಮಾರಾಟ ಅಂಗಡಿಯನ್ನುಈ ಜಾಗದಿಂದ ತೆರುವುಗೊಳಿಸಬೇಕೆಂದು ಕಿತ್ತೂರು ಕರ್ನಾಟಕ ಸೇನೆ ವತಿಯಿಂದ ನಿರಂತರ ಧರಣಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಂಘಟನೆ ಪದಾಧಿಕಾರಿಗಳಾದ ಅಭಿಷೇಕ್ ಕಲಾಲ, ಆನಂದ ಪಾಟೀಲ, ಫಕ್ರು ಕುಸ್ಲಾಪುರ ಯಲ್ಲಪ್ಪ ತಿಮ್ಮಾಪೂರ ಪಿಂಟು ಕುದುರಿ ಮತ್ತು ಇನ್ನೂ ಅನೇಕ ಕಾರ್ಯಕರ್ತರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಗಣಪತಿ ಮೆರವಣಿಗೆ ಡಿಜೆಗೆ ಪೊಲೀಸರ ಆಕ್ಷೇಪ ಲಾಠಿ ಏಟು: ಪೊಲೀಸರ ವಿರುದ್ಧ ಯುವಕರ ಆಕ್ರೋಶ
ಪರೀಕ್ಷೆ ಮತ್ತು ಕ್ರೀಡಾಕೂಟ ಒಂದೇ ದಿನ ಆಯೋಜನೆ- ಕ್ರೀಡಾ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯ ಕೊರತೆ -ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆತಂಕ